top of page
Search

ಹನುಮ ಮಾಲೆ & ಜಯಂತಿ

  • Mar 13
  • 1 min read

ARJUN K S

ಹನುಮ ಮಾಲೆ & ಜಯಂತಿ

24 Dec 2023

Location: Karnataka / Mandya / Srirangapatna / Kudalukuppe

Categories: Traditional and Beliefs


ಶ್ರೀರಂಗಪಟ್ಟಣ ತಾಲೂಕಿನ ಕೂಡಲಕುಪ್ಪೆ ಗ್ರಾಮದಲ್ಲಿ ಗ್ರಾಮದ ಯುವಕರು ಹನುಮ ಮಾಲೆಯನ್ನು ಧರಿಸಿ 5 ದಿನಗಳ ಕಾಲ ವ್ರತ ಮಾಡಿ, ಗ್ರಾಮದ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 23/12/2023 ರಂದು ಹನುಮ ಜಯಂತಿಯನ್ನು ಆಚರಿಸಿ, 24/12/2023 ರಂದು ಶ್ರೀರಂಗಪಟ್ಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ಮಂದಿರ ಪುನರ್ ಪ್ರತಿಷ್ಟಾಪನೆಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡರು. ಈ ಹಿಂದೆ ಗ್ರಾಮದಲ್ಲಿ ಹನುಮ ಜಯಂತಿಯಂದು ನೆಪ ಮಾತ್ರಕ್ಕೆ ಮಾತ್ರ ಪೂಜಾ ಕಾರ್ಯ ನಡೆಯುತ್ತಿದ್ದವು. ಆದರೆ ಗ್ರಾಮದ ಯುವಕರು ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿ, ತೋರಣ ಕಟ್ಟಿ, ಹನುಮನ ಭಜನೆ ಮಾಡುತ್ತ ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಿದರು. ನಂತರ ಗ್ರಾಮಸ್ಥರಿಗೆ ಪ್ರಸಾದವನ್ನು ವಿತರಿಸಿದರು.


 
 
 

Comments

Rated 0 out of 5 stars.
No ratings yet

Add a rating
Copyright @ 2023 by SWAGRAAM FOUNDATION
+91 83106 52068
  • Instagram
  • YouTube
  • Facebook
  • LinkedIn
bottom of page