1000 ವರ್ಷಗಳ ಇತಿಹಾಸದ ಶ್ರೀ ಚನ್ನಕೇಶವ ಸ್ವಾಮಿ ದೇವಸ್ಥಾನ
- Mar 13
- 1 min read
ALOK D R
1000 ವರ್ಷಗಳ ಇತಿಹಾಸದ ಶ್ರೀ ಚನ್ನಕೇಶವ ಸ್ವಾಮಿ ದೇವಸ್ಥಾನ
19 Dec 2023
Location: Karnataka / Tumkur / Kunigal / Doddamadhure
Categories: Built Heritage
ನಮ್ಮ ಗ್ರಾಮದಲ್ಲಿ ಈ ದೇವಸ್ಥಾನ ಇರುವುದೇ ನಮ್ಮ ಗ್ರಾಮದ ಹೆಮ್ಮೆ. ಏಕೆಂದರೆ ಚೋಳರು ಇದನ್ನು ಒಂದೇ ರಾತ್ರಿಯಲ್ಲಿ ಕಟ್ಟಿದರೆಂಬ ಇತಿಹಾಸ. ಅದು ಏನೇ ಇರಲಿ, ಇಲ್ಲಿ ಬೇಲೂರು ಶ್ರೀ ಚನ್ನಕೇಶವ ಸ್ವಾಮಿಯನ್ನೇ ಹೋಲುವ ಮೂರ್ತಿ ಇದ್ದು, ದೇವಸ್ಥಾನದ ವಿನ್ಯಾಸ ಮತ್ತು ಮಾದರಿ ಎಂತವರನ್ನು ಮಂತ್ರ ಮುಗ್ದರನ್ನಾಗಿಸದೆ ಇರದು. ಅಂದಿನ ಕಾಲದಲ್ಲಿ ಎಂತಹ ತಂತ್ರಜ್ಞಾನ ಬಳಸಿ ಈ ದೇವಸ್ಥಾನ ನಿರ್ಮಾಣ ಮಾಡಿದರು ಎಂಬುದೇ ಸೋಜಿಗ, ಕಾರಣ ಬೃಹದಾಕಾರವಾದ ಕಂಬಗಳು ಮತ್ತು ಕಲ್ಲುಗಳು. ಈಗಾಗಿ ಈ ದೇವಸ್ಥಾನ ನಮ್ಮ ಗ್ರಾಮದಲ್ಲಿ ಇರುವುದೇ ನಮ್ಮ ಹೆಮ್ಮೆ. ಜೊತೆಗೆ ಇದು 11 ಮತ್ತು 12ನೇ ಶತಮಾನದಲ್ಲಿ ನಿರ್ಮಾಣವಾಗಿ ನಂತರ 14ನೇ ಶತಮಾನದಲ್ಲಿ ಅಭಿವೃದ್ಧಿವೊಂದಿ, 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅರಸರು ರಾಜಗೋಪುರ ಮಾಡಿದರು ಎಂಬುದು ಇತಿಹಾಸ. ದೇವಸ್ಥಾನದ ಒಳಗಡೆ ರಾಮಾನುಜಾಚಾರ್ಯರ ಕಲ್ಲಿನ ಮೂರ್ತಿಯು ಸಹ ಇದೆ. ಇತ್ತೀಚೆಗೆ ಗ್ರಾಮಸ್ಥರು ದೇವಸ್ಥಾನ ಸೋರುತ್ತಿತ್ತು ಎಂದು ಮೇಲಿನ ಹಳೆಯ ಚುರ್ಕಿ ಕಿತ್ತು, ಹೊಸದಾಗಿ ಛಾವಣಿ ಹಾಕಿ ಮಣ್ಣಿನ ಟೈಲ್ಸ್ ವ್ಯವಸ್ಥೆ ಮಾಡಿದ್ದಾರೆ. ದೊಡ್ಡಮಧುರೆಯು ಬೆಂಗಳೂರು-ಹಾಸನ ಹೆದ್ದಾರಿಯಲ್ಲಿ ಸಿಗುವ ಎಡೆಯೂರಿನ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನದಿಂದ ಕೇವಲ 4ಕಿಲೋಮೀಟರ್ ಅಂತರದಲ್ಲಿ ಇದೆ. ಇಲ್ಲಿಗೆ ಎಲ್ಲಾ ಸಂದರ್ಭದಲ್ಲಿ ಸಾರಿಗೆ-ಸಂಪರ್ಕವಿದೆ. ಈ ಗ್ರಾಮದ ಎರಡು ಕಡೆ ಶ್ರೀ ಹಟ್ಟಿಲಕ್ಕಮ್ಮ ಮತ್ತು ಶ್ರೀ ಜಲಧಿಗೆರೆ ಅಮ್ಮನವರ ದೇವಸ್ಥಾನ ಇದ್ದು, ಎಲ್ಲವೂ ಪ್ರೇಕ್ಷಣೀಯ ಸ್ಥಳಗಳೇ ಆಗಿವೆ. ಧನ್ಯವಾದಗಳು.


Comments