ಹೊಯ್ಸಳ ಕಾಲದ ಅಮೂಲ್ಯ ನಿಧಿ, ಕೇಶವೇಶ್ವರ ದೇವಾಲಯ - ಭಾಗ-2
- Mar 13
- 1 min read
T V Nataraj Pandith
ಹೊಯ್ಸಳ ಕಾಲದ ಅಮೂಲ್ಯ ನಿಧಿ, ಕೇಶವೇಶ್ವರ ದೇವಾಲಯ - ಭಾಗ-2
10 Jan 2024
Location: Karnataka / Hassan / Channarayapatna / A Belaguli
Categories: Built Heritage,Art and Crafts
ಈ ಕೇಶವೇಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ಇರುವ ಒಂದು ಶ್ಲೋಕವು ಎಲ್ಲರ ಗಮನ ಸೆಳೆಯುತ್ತದೆ. ಹರಿಹರರನ್ನು ಸ್ತುತಿಸಿರುವ ಶ್ಲೋಕದಲ್ಲಿ ಕವಿಯ ಪ್ರೌಢಿಮೆ ಸುಂದರವಾಗಿ ವ್ಯಕ್ತವಾಗಿದೆ. ಕಾವ್ಯಾತ್ಮಕ ಶೈಲಿ ಹಾಗೂ ಪದ ಸಂಯೋಜನೆಯ ಚಮತ್ಕಾರಗಳು ಅದ್ಭುತವಾಗಿವೆ. ಇದರ ಸ್ವಾರಸ್ಯವನ್ನು ಅರಿಯಲು, ಮೂಲ ಪದ್ಯವನ್ನು ಹಾಗೆಯೇ ಓದಿದರೆ ಅದು ಶಿವನನ್ನು ಸ್ತುತಿಯಿದ್ದಂತಿದೆ, ಮೊದಲಿನ ಒಂದು ಅಕ್ಷರವನ್ನು ಬಿಟ್ಟು ಓದಿದರೆ ಅದು ವಿಷ್ಣುಪರವಾದ ಸ್ತುತಿಯಾಗುತ್ತದೆ. ಸ್ವಾರಸ್ಯಕರವಾಗಿರುವ ಈ ಪದ್ಯವನ್ನು ನಿಧಾನವಾಗಿ ಓದಿ ಆನಂದಿಸಿ.
ಪಾಯಾತ್ಕುಮಾರ ಜನಕಃ ಶಶಿಖಂಡಮೌಳೀ |
ಶಂಖಪ್ರಭಶ್ಚ ನಿಧನಶ್ಚ ಗವೀಶಯಾನಃ ||
ಇದು ಮೊದಲ ಪಾದ. ಇದರ ಅರ್ಥ ಹೀಗಿದೆ.
ಕುಮಾರ ಜನಕಃ – ಷಣ್ಮುಖನ ತಂದೆ (ಶಿವ)
ಮೊದಲಿನ ಅಕ್ಷರ ಕು ಅನ್ನು ಬಿಟ್ಟು ಓದಿದರೆ ಅದು
ಮಾರ ಜನಕಃ – ಮನ್ಮಥನ ತಂದೆ (ವಿಷ್ಣು)
ಅದೇ ರೀತಿ
ಶಶಿಖಂಡ ಮೌಳೀ – ತಲೆಯಲ್ಲಿ ಚಂದ್ರನನ್ನು ಧರಿಸಿರುವವ (ಶಿವ)
ಶಿಖಂಡ ಮೌಳೀ – ತಲೆಯಲ್ಲಿ ನವಿಲುಗರಿಯನ್ನು ಧರಿಸಿರುವವ (ವಿಷ್ಣು)
ನಂತರ
ಶಂಖ ಪ್ರಭ – ಶಂಖದಂತೆ ಬಿಳಿ ಬಣ್ಣದವ (ಶಿವ)
ಖಪ್ರಭ – ಆಕಾಶದಂತೆ ನೀಲವರ್ಣದವ (ವಿಷ್ಣು)
ಹಾಗೂ
ಗವೀಶಯಾನಃ – ಎತ್ತನ್ನು ವಾಹನವಾಗಿರುವವ (ಶಿವ)
ವೀಶಯಾನಃ – ಗರುಡವಾಹನವುಳ್ಳವ (ವಿಷ್ಣು)
ಈಗ ಎರಡನೇ ಪಾದ
ಗಂಗಾಂಚ ಪನ್ನಗಧರಶ್ಚ ಉಮಾವಿಲಾಸಃ |
ಆದ್ಯಕ್ಷರೇಣ ಸಹಿತೋ ರಹಿತೋಹಿ ದೇವಃ ||
ಮೊದಲಿಗೆ
ಗಂಗಾಂ – ತಲೆಯಲ್ಲಿ ಗಂಗೆ ಧರಿಸಿದವ (ಶಿವ)
ಗಾಂ – ಭೂಮಿಯನ್ನು ಧರಿಸಿದವ (ವಿಷ್ಣು)
ನಂತರದಲ್ಲಿ
ಪನ್ನಗಧರಶ್ಚ – ಹಾವನ್ನು ಧರಿಸಿರುವವ (ಶಿವ)
ನಗಧರಶ್ಚ – ಆಭರಣಗಳನ್ನು ಧರಿಸಿರುವವ (ವಿಷ್ಣು)
ಹಾಗೂ
ಉಮಾ ವಿಲಾಸಃ – ಪಾರ್ವತಿಯನ್ನು ಪತ್ನಿಯನ್ನಾಗಿ ಉಳ್ಳವ (ಶಿವ)
ಮಾ ವಿಲಾಸಃ – ಲಕ್ಮ್ಮಿಯನ್ನು ಪತ್ನಿಯನ್ನಾಗಿ ಉಳ್ಳವ (ವಿಷ್ಣು)
ಇವರೀರ್ವರೂ
ಆದ್ಯಕ್ಷರೇಣ – ಆರಂಭದ ಅಕ್ಷರದಿಂದ
ಸಹಿತೋ ರಹಿತೋಹಿ ದೇವಃ – ಸಹಿತನಾಗಿರುವ ಹಾಗೂ ರಹಿತನಾಗಿರುವ
ದೇವನು ನಮ್ಮನ್ನು ಸಂರಕ್ಷಿಸಲಿ.
ಚಿತ್ರ ಕೃಪೆ: ರಾಕೇಶ್ ಹೊಳ್ಳ
Youtube Link :https://youtu.be/BNX3S7jYmDs
https://www.youtube.com/watch?v=bXZHv4tSCHc



Comments