ಪಿಳ್ಳಂಗೇರಿಯ ವೆಂಕಟರಮಣ ದೇವಾಲಯ
- Mar 13
- 2 min read
Sreenivasa Murthy N S
ಪಿಳ್ಳಂಗೇರಿಯ ವೆಂಕಟರಮಣ ದೇವಾಲಯ
23 Dec 2023
Location: Karnataka / Shimoga / Shimoga / Pillangire
Categories: Built Heritage
ನಾಡಿನ ದೇವಾಲಯಗಳಲ್ಲಿ ಹಲವು ದೇವರಿಗೆ ದೇವಾಲಯಗಳು ನಿರ್ಮಾಣವಾಗಿದ್ದರೂ ವಿಜಯನಗರ ಮತ್ತು ನಂತರ ಕಾಲದಲ್ಲಿ ಹಲವು ವೆಂಕಟರಮಣ ಹಾಗೂ ರಂಗನಾಥನ ದೇವಾಲಯಗಳು ನಿರ್ಮಾಣವಾಗಿದೆ. ರಾಜ್ಯದ ಬಹುತೇಕ ಕಡೆ ನಂತರ ವೆಂಕಟರಮಣ ದೇವಾಲಯವನ್ನು ನೋಡಬಹದು. ಅವುಗಳಲ್ಲಿ ಶಿವಮೊಗ್ಗ ಜಿಲ್ಲೆಯ ಪಿಳ್ಳಂಗೇರಿಯ ದೇವಾಲವೂ ಒಂದು.
ಇತಿಹಾಸ ಪುಟದಲ್ಲಿ ಪಿಳ್ಳಂಗೇರಿ ಒಂದು ಪ್ರಮುಖ ಗ್ರಾಮವಾಗಿ ಗುರುತಿಸಿಕೊಂಡಿದ್ದು ಸಿಕ್ಕ ಒಂದು ಶಾಸನ ಇಲ್ಲಿನ ಈಶ್ವರ ದೇವಾಲಯದ ಉಲ್ಲೇಖವನ್ನು ನೋಡಬಹುದು. ಆದರೆ ವೆಂಕಟರಮಣ ದೇವಾಲಯ ನಂತರ ಕಾಲದಲ್ಲಿ ಪಾಳೇಗಾರರಿಂದ ಆದ ನಿರ್ಮಾಣ. ಈ ದೇವಾಲಯ ಪಿಳ್ಳಯ್ಯ ಎಂಬ ಪಾಳೇಗಾರ ತನ್ನ ಕನಸಿನಲ್ಲಿ ಬಂದ ರಂಗನಾಥನ ಕೋರಿಕೆ ಮೇರೆಗೆ ಈ ದೇವಾಲಯ ನಿರ್ಮಿಸಿದ ಕಾರಣ ಪಿಳ್ಳಂಗೇರಿ ಎಂಬ ಹೆಸರು ಬಂದಿತು ಎನ್ನಲಾಗಿದೆ. ಇಲ್ಲಿನ ಮೂರ್ತಿಯನ್ನು ರಂಗನಾಥ, ವೆಂಕಟರಮಣ ಎಂದೇ ಕರೆಯಲಾಗುತ್ತದೆ. ಸ್ಥಳಿಯ ಪುರಾಣದಂತೆ ಇಲ್ಲಿ ಮಹೇಂದ್ರ ತನ್ನ ಶಾಪವನ್ನು ಇಲ್ಲಿ ತುಂಗಾ ನದಿಯಲ್ಲಿ ಪರಿಹರಿಸಿಕೊಂಡ ಕಾರಣ ಇಲ್ಲಿಗೆ ಮಹೇಂದ್ರಗಿರಿ ಎಂಬ ಹೆಸರು ಬಂದಿದ್ದೆ ಎನ್ನಲಾಗಿದೆ. ಇಲ್ಲಿ ನದಿಯಲ್ಲಿ ಮಹೇಂದ್ರಮಂಟಪ ಈಗಲೂ ಇದೆ,
ದೇವಾಲಯ ಮೂಲತಹ ಸುಮಾರು 16 – 17 ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ಗರ್ಭಗುಡಿ, ಸುಖನಾಸಿ, ನವರಂಗ ಹೊಂದಿದ್ದು ಗರ್ಭಗುಡಿಯಲ್ಲಿ ರಂಗನಾಥ ಎಂದು ಕರೆಯುವ ಶಿಲ್ಪವಿದೆ. ಶ್ರೀ ಲಕ್ಶ್ಮೀ ವೆಂಕಟರಮಣ ಎಂದೇ ಪೂಜಿತನಾಗುವ ಈ ಶಿಲ್ಪ ಇಲ್ಲಿನ ಪ್ರಮುಖ ದೇವರು. ಗರ್ಭಗುಡಿಯ ಬಾಗಿಲಿವಾಡದಲ್ಲಿ ಲೋಹದ ಹೊದಿಕೆ ಇದ್ದು ದಶಾವತಾರಗಲ ಕೆತ್ತನೆ ನೋಡಬಹುದು. ಚಕ್ರ, ಶಂಖ, ಗಧಾ ಹಾಗೂ ಪದ್ಮದಾರಿಯಾದ ಶಿಲ್ಪದ ಪ್ರಭಾವಳಿ ಸರಳವಾಗಿದ್ದು ಕೀರ್ತಿಮುಖವಿದೆ. ಕೊಳಗದ ಮಾದರಿಯ ಕಿರಿಟವಿದ್ದು ಕಾಲಿನ ಕಡಗ, ಕೊರಳಿನ ಹಾರಗಳು ಗಮನ ಸೆಳೆಯುತ್ತದೆ.
ಸುಖನಾಸಿಯ ದ್ವಾರದಲ್ಲಿ ವೈಷ್ಣವ ದ್ವಾರಪಾಲಕರಿದ್ದು ತ್ರಿಶಾಖ ಮಾದರಿಯ ದ್ವಾರವಿದೆ. ನವರಂಗದಲ್ಲಿ ನಾಲ್ಕು ಕಂಭಗಳಿದ್ದು ಇಲ್ಲಿನ ಉಬ್ಬು ಶಿಲ್ಪಗಳು ಗಮನ ಸೆಳೆಯುತ್ತದೆ.
ದೇವಾಲಯದ ಆವರಣದಲ್ಲಿ ಪ್ರತ್ಯೇಕ ಮಂದಿರದಲ್ಲಿ ಆಂಜನೇಯನ ದೇವಾಲಯವಿದೆ. ಈ ಶಿಲ್ಪವನ್ನು ಕೂಡಲಿಯ ಅಕ್ಷೋಬತೀರ್ಥರು ಒಮ್ಮೆ ಇಲ್ಲಿಗೆ ಬಂದಾಗ ಅಂಜನೇಯನ ಶಿಲ್ಪ ಇರದ ಕಾರಣ ಅಂಗಾರದಲ್ಲಿ ಆಂಜನೇಯನ ಆಕೄತಿಯನ್ನು ಬರೆದರು ಎಂಬ ನಂಬಿಕೆ ಇದೆ. ವಿಜಯನಗರ ಕಾಲದ ಈ ಶಿಲ್ಫ ಸುಮಾರು ಆರು ಅಡಿ ಎತ್ತರವಿದ್ದು ಪಾರ್ಶ್ವಕ್ಕೆ ತಿರುಗಿದೆ. ಒಂದು ಕೈಯನ್ನು ಮೇಲೆ ಎತ್ತಿದ್ದು ಮತ್ತೊಂದು ಕೈ ಸೊಂಟದ ಹತ್ತಿರವಿದ್ದು ಮಾವಿನ ಗೊಂಚಲನ್ನು ಹಿಡಿದಂತೆ ಇದೆ. ಕೆಳಭಾಗದಲ್ಲಿ ಅಕ್ಷಯಕುಮಾರನ ಕೆತ್ತನೆ ನೋಡಬಹುದು. ನೂತನವಾಗಿ ನಿರ್ಮಾಣವಾದ ಆಂಜನೇಯನ ದೇವಾಲಯದ ಮೇಲೆ ರಾಮಾಂಜನೇಯರ ನೂತನ ಶಿಲ್ಪವಿದೆ.
ಇಲ್ಲಿ ಅಂಡಾಳಮನ್ನ ಶಿಲ್ಪವಿದ್ದು ಧನುರ್ಮಾಸದಲ್ಲಿ ಅಂಡಾಳಮ್ಮ ತುಳಸಿಯಲ್ಲಿ ಮೂರ್ತಿಯನ್ನ ಅರ್ಚಿಸಿದ ನೆನಪಲ್ಲಿ ಭೂದೇವಿ ಸ್ವರೂಪದಲ್ಲಿ ಅಂಡಾಳಮನ ಶಿಲ್ಪವನ್ನು ಹಾಗೂ ಶ್ರೀದೇವಿ ಸ್ವರೂಪದಲ್ಲಿ ಲಕ್ಷ್ಮೀಯನ್ನು ಉರಿನ ಒಳಗೆ ಪೂಜಿಸಲಾಗುತ್ತಿದೆ. ಇಲ್ಲಿ ನೂತನವಾಗಿ ಯಾಗ ಶಾಲೆಯನ್ನು ನಿರ್ಮಿಸಲಾಗಿದೆ. ಹೊಸದಾಗಿ ಭೋಜನಶಾಲೆ ದರ್ಪಣಮಂದಿರ ಮುಂತಾದ ಕೆಲಸಗಳನ್ನು ಈಗ ನಿರ್ಮಿಸಲಾಗಿದೆ. ಆವರಣದಲ್ಲಿ ಕ್ಷೇತ್ರಪಾಲಕರ ಮಂದಿರವಿದೆ.
ಇಲ್ಲಿ ಧನುರ್ಮಾಸದಲ್ಲಿ ವಿಷೇಶ ಪೂಜೆಗಳು ನಡೆಯಲಿದ್ದು ವೈಕುಂಠ ಏಕಾದಶಿಯಂದು ವಿಷೇಶ ಅಲಂಕಾರಗಳು ನಡೆಯಲಿದೆ.
ತಲುಪುವ ಬಗ್ಗೆ : ಶಿವಮೊಗ್ಗದಿಂದ ಕೂಡಲಿ – ಹೊಳೆಹೊನ್ನೂರು ಮಾರ್ಗದಲ್ಲಿ ಸುಮಾರು ಎಂಟು ಕಿ ಮೀ ದೂರದಲ್ಲಿ ಶಿವಮೊಗ್ಗದಿಂದ ಇದೆ. ಸಮೀಪದ ಕೂಡಲಿಯ ಹೊಯ್ಸಳರ ರಾಮೇಶ್ವರ ದೇವಾಲಯ ಹಾಗೂ ಶಂಕರ ಮಠವನ್ನು ನೋಡಬಹುದು.
ಶ್ರೀನಿವಾಸ ಮೂರ್ತಿ ಎನ್. ಎಸ್.
Mobile - 9449553435



Comments