ಪ್ರಭುದೇವರ ಮಠ – ಮಳೆಗೂ ಹರಿಚಂದ್ರ ಪುರಾಣಕ್ಕೂ ನಂಟು ಉಂಟು.
- Mar 13
- 1 min read
Mahesh H C
ಪ್ರಭುದೇವರ ಮಠ – ಮಳೆಗೂ ಹರಿಚಂದ್ರ ಪುರಾಣಕ್ಕೂ ನಂಟು ಉಂಟು.
10 Jan 2024
Location: Karnataka / Gadag / Shirahatti / Kadakola
Categories: Built Heritage,Traditional and Beliefs
ಇದು ಊರ ಮಧ್ಯೆ ಇರುವ ಪ್ರಭುದೇವರ ಮಠ. ಒಂದು ಪಾರ್ಶ್ವದಲ್ಲಿ ರೇಣುಕಾಚಾರ್ಯರು ಹಾಗೂ ಮತ್ತೊಂದರಲ್ಲಿ ಅಲ್ಲಮಪ್ರಭು ದೇವರ ಚಿತ್ರಗಳನ್ನು ಬಿಡಿಸಲಾಗಿದೆ. ಈ ಮಠದ ಉಸ್ತುವಾರಿಯನ್ನು ಇಲ್ಲಿನ ಲಿಂಗಾಯಿತ ಸಮುದಾಯದವರು ನೋಡಿಕೊಳ್ಳುತ್ತಿದ್ದಾರೆ. ಈ ಊರಿನಲ್ಲಿ ಮಳೆ ಬಾರದೆ ಜನರಿಗೆ ತೊಂದರೆ ಉಂಟಾದಾಗ ಈ ಪ್ರಭುದೇವರ ಮಠದಲ್ಲಿ ಸಾಯಂಕಾಲದ ನಂತರ ಹರಿಶ್ಚಂದ್ರ ಪುರಾಣವನ್ನು ಓದಿಸುತ್ತಾರೆ. ನಂತರ ಮಳೆ ಬಂದೇ ಬರುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.



Comments