top of page
Search

ನನ್ನೂರು ಕೂಡಲಕುಪ್ಪೆಯ ದೇಗುಲಗಳು

  • Mar 13
  • 1 min read

ARJUN K S

ನನ್ನೂರು ಕೂಡಲಕುಪ್ಪೆಯ ದೇಗುಲಗಳು

8 Jan 2024

Location: Karnataka / Mandya / Srirangapatna / Kudalukuppe

Categories: Traditional and Beliefs


ನನ್ನೂರಿನ ನಾಲ್ಕು ದಿಕ್ಕುಗಳಲ್ಲಿ ಪ್ರಸಿದ್ಧ ದೇವಾಲಯಗಳು ಇದ್ದು, ಭಕ್ತಿ ಪ್ರಧಾನವುಳ್ಳ ಧಾರ್ಮಿಕ ಕೇಂದ್ರವಾಗಿದೆ. ಗ್ರಾಮದಲ್ಲಿ ಶ್ರೀ ಶಕ್ತಿ ಶನೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಚಂದ್ರಮೌಳೆಶ್ವರ ಸ್ವಾಮಿ ದೇವಸ್ಥಾನ. ಶ್ರೀ ಅಂಕನಾಥೆಶ್ವರ ಸ್ವಾಮಿ ದೇವಸ್ಥಾನ, ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಮಾರಮ್ಮ ದೇವಸ್ಥಾನ, ಶ್ರೀ ಆಂಜನೇಯ ಸ್ವಾಮಿ ದೇಗುಲಗಳು ಇವೆ.

ಶ್ರೀ ಶಕ್ತಿ ಶನೇಶ್ವರ ಸ್ವಾಮಿ ದೇವಾಲಯು ಜಿಲ್ಲೆಯಲ್ಲಿಯೇ ಅತ್ಯಂತ ಜನಪ್ರಿಯವಾಗಿದ್ದು, ವಿಶೇಷವಾಗಿ ವರ್ಷಕ್ಕೆರಡು ಬಾರಿ ಸ್ವಾಮಿಯ ರಥೋತ್ಸವ ಜರಗುತ್ತದೆ.

ಇದರ ಜೊತೆಗೆ ಗ್ರಾಮದೇವತೆಯಾದ ಕಾರ್ಕಳ್ಳಿ ಮಾರಮ್ಮನಿಗೆ ಪ್ರತಿ ವರ್ಷ ಯುಗಾದಿ ಹಬ್ಬದ ಮುಂದೆ, ಗ್ರಾಮದ ಮಹಿಳೆಯರು ಪ್ರಮುಖ ಬೀದಿಗಳಲ್ಲಿ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಹೋಗಿ ತಂಬಿಟ್ಟಿನ ಆರತಿಯನ್ನು ಮಾಡುತ್ತಾರೆ.

ಇಲ್ಲಿಯ ಒಂದು ವಿಶೇಷವೆಂದರೆ ಮಾರಮ್ಮ ಆಂಜನೇಯ ಬಸವೇಶ್ವರರ ದೇವಸ್ಥಾನಗಳು ಒಂದೇ ಸ್ಥಳದಲ್ಲಿದ್ದು, ಮುಂಬಾಗದಲ್ಲಿರುವ ವಿಶಾಲವಾದ ಸ್ಥಳದಲ್ಲಿ ಗ್ರಾಮದ ಪ್ರಮುಖರು ನ್ಯಾಯ ಪಂಚಾಯತಿಯನ್ನು ಮಾಡುತ್ತಿದ್ದರು.

ಇತಿಹಾಸ ಪ್ರಸಿದ್ಧ ಶ್ರೀ ಅಂಕನಾಥೇಶ್ವರ ದೇವಾಲಯದಲ್ಲಿದ್ದ ಬೆಳ್ಳಿಯ ರಥವು ಮುಳುಗಡೆಯಾಗಿದೆ ಎಂಬ ಮಾತು ಕೇಳಿ ಬಂದಿದೆ.

ಲೋಕಕಲ್ಯಾಣಕ್ಕಾಗಿ ನಮ್ಮ ಗ್ರಾಮದಲ್ಲಿ ಮೂರು ಬಾರಿ ಅತಿ ರುದ್ರ ಮಹಾಯಾಗ ನಡೆದಿದೆ ಮತ್ತು ಪ್ರತಿ ಗುರುವಾರ, ಶನಿವಾರ ಅನ್ನದಾನ ನಡೆಯುವುದು ವಿಶೇಷವಾಗಿದೆ.


 
 
 

Comments

Rated 0 out of 5 stars.
No ratings yet

Add a rating
Copyright @ 2023 by SWAGRAAM FOUNDATION
+91 83106 52068
  • Instagram
  • YouTube
  • Facebook
  • LinkedIn
bottom of page