ಐತಿಹಾಸಿಕ ಉದ್ಭವ ಲಿಂಗರೂಪದ ರಾಮಲಿಂಗೇಶ್ವರ ದೇವಸ್ಥಾನ
- Mar 13
- 1 min read
SHIVARUDRAPA HONGAL
ಐತಿಹಾಸಿಕ ಉದ್ಭವ ಲಿಂಗರೂಪದ ರಾಮಲಿಂಗೇಶ್ವರ ದೇವಸ್ಥಾನ
7 Jan 2024
Location: Karnataka / Dharwad / Dharwad / Jeerigavada
Categories: Built Heritage,Traditional and Beliefs
ನಮ್ಮ ಊರಿನ ರಾಮಲಿಂಗೇಶ್ವರ ದೇವಸ್ಥಾನವು ಅತ್ಯಂತ ಪುರಾತನ ಹಾಗೂ ಐತಿಹಾಸಿಕ ಮಹತ್ವ ಹೊಂದಿದ್ದು, ಇಲ್ಲಿನ ದೇವರು ನೈಸರ್ಗಿಕವಾಗಿ ಉದ್ಭವಿಸಿದ ಲಿಂಗರೂಪದಲ್ಲಿ ಪೂಜಿಸಲ್ಪಡುತ್ತಾನೆ.
ಈ ದೇವಾಲಯದ ಮೂಲ ಕಥೆ ಈ ಭಾಗದ ದೇಶಪಾಂಡೆ ಮನೆತನದವರಿಂದ ಆರಂಭವಾಗುತ್ತದೆ. ಅವರು ತಮ್ಮ ವಂಶದಲ್ಲಿ ಗಂಡು ಸಂತಾನವಾಗಬೇಕೆಂಬ ಹರಕೆಯೊಂದಿಗೆ ಕಾಶಿ-ರಾಮೇಶ್ವರ ಯಾತ್ರೆ ಮಾಡುವ ಇಚ್ಛೆ ಹೊಂದಿದ್ದರು. ವಯಸ್ಸು ಹೆಚ್ಚಾದ ಕಾರಣ ಯಾತ್ರೆಗೆ ಹೋಗಲು ಸಾಧ್ಯವಾಗದೆ, ತಮ್ಮ ಊರಿನಲ್ಲಿಯೇ ರಾಮಲಿಂಗೇಶ್ವರ ದೇವರ ದರ್ಶನ ದೊರಕಿಸಬೇಕು ಎಂದು ಬೇಡಿದ ಪರಿಣಾಮವಾಗಿ ಈ ಲಿಂಗಮೂರ್ತಿಯು ಕಂಡುಬಂದಿತು. ಇದನ್ನು ಗ್ರಾಮಸ್ಥರು ದೇವರ ಕೃಪೆ ಎಂದು ನಂಬಿ, ದೇವಾಲಯ ನಿರ್ಮಿಸಿ, ಪ್ರತಿವರ್ಷ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ಆಚರಿಸುತ್ತಿದ್ದಾರೆ.
ಪೂಜೆಗೆಂದು ದೇವಸ್ಥಾನ ಪಕ್ಕದಲ್ಲೇ ಬಾವಿಯೂ ನಿರ್ಮಿಸಲಾಗಿದೆ. ಕೆಲವರ್ಷಗಳ ಕಾಲ ಜಾತ್ರೆ ಸ್ಥಗಿತಗೊಂಡಿದ್ದರೂ, 2000ರಲ್ಲಿ ಊರಿನ ಹಿರಿಯರು ಮತ್ತು ಯುವಕರು ಮತ್ತೆ ಒಗ್ಗೂಡಿ ದೇವಸ್ಥಾನದ ಜೀರ್ಣೋದ್ಧಾರ ಮಾಡಿದ್ದಾರೆ. ಇಂದಿಗೂ ಪ್ರತಿವರ್ಷ ರಾಮನವಮಿಯಂದು ಪಲ್ಲಕ್ಕಿ ಉತ್ಸವ ಜರಗುತ್ತದೆ. ಮುಂದಿನ ದಿನಗಳಲ್ಲಿ ಪುನಃ ರಥೋತ್ಸವ ಪ್ರಾರಂಭಿಸುವ ಯೋಜನೆಯೂ ಮುಂದಿಟ್ಟಿದ್ದಾರೆ.



Comments